ಕರ್ನಾಟಕ

karnataka

ETV Bharat / videos

ಬೋನಿಗೆ ಬಿದ್ದ ಕರಡಿ: ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

By

Published : Aug 29, 2019, 3:24 AM IST

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಪರ್ವತದ ಬಳಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಕರಡಿಯೊಂದು ಬಿದ್ದಿದೆ. ಕಳೆದ ಒಂದು ತಿಂಗಳಿನಿಂದ ಹನುಮನಹಳ್ಳಿ, ಚಿಕ್ಕರಾಂಪೂರ, ಪಂಪಾಸರೋವರ, ಜಂಗ್ಲಿ, ವಿರೂಪಾಪೂರಗಡ್ಡಿ ಗ್ರಾಮಗಳ ಸುತ್ತ ತಿರುಗಾಡಿದ್ದ ಈ ಕರಡಿ, ಜನರಲ್ಲಿ ಭಯ ಹುಟ್ಟಿಸಿತ್ತು. ಸೆರೆ ಹಿಡಿಯಬೇಕೆಂಬ ಜನರ ಮನವಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಇಟ್ಟ ಬೋನಿಗೆ 7 ವರ್ಷದ ಕರಡಿ ಸೆರೆಯಾಗಿದ್ದು, ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

ABOUT THE AUTHOR

...view details