ಹಾವೇರಿಯಲ್ಲಿ ಮಂಜಿನ ಹನಿಯ ದೃಶ್ಯಕಾವ್ಯ:ನೋಡುತ್ತಲೇ ಹುಟ್ಟುತ್ತೆ ಕವಿ ಮನಸ್ಸು
ಹಾವೇರಿ: ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಮಂಜು ಬೀಳಲಾರಂಭಿಸಿದೆ. ಮುಂಜಾನೆಯ ಮಂಜಿನ ಹನಿಗಳು ದೃಶ್ಯಕಾವ್ಯ ಸೃಷ್ಠಿಸುತ್ತಿವೆ. ಜೇಡ ಹೆಣೆದ ಬಲೆಗೆ ಅಂಟಿಕೊಂಡಿರುವ ಮಂಜು ಮುತ್ತಿನ ಹಾರದಂತೆ ಭಾಸವಾಗುತ್ತಿದೆ. ಪ್ರಕೃತಿಯ ಕಲಾಕುಂಚದಲ್ಲಿ ಅರಳಿದ ಮಂಜಿನ ಮುತ್ತಿನ ಹಾರಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ಸೂರ್ಯೋದಯದೊಂದಿಗೆ ಆರಂಭವಾಗುವ ಈ ಹಾರಗಳು ಬಿಸಿಲೇರುತ್ತಿದ್ದಂತೆ ಮಾಯವಾಗುತ್ತವೆ.