ಉತ್ತರಕರ್ನಾಟಕ ಭಾಗದ ನೆರೆ ಪ್ರದೇಶಕ್ಕೆ ಮೇವು.. ಮಾನವೀಯತೆ ಮೆರೆದ ಜಿಗಳಿ ಗ್ರಾಮದ ಜನ
ಪ್ರವಾಹದಿಂದ ನಲುಗಿದ ಉತ್ತರ ಕರ್ನಾಟಕ ಭಾಗದ ಜಾನುವಾರುಗಳಿಗೆ ಮೇವಿನ ಸಮಸ್ಯೆ ಕಾಡುತ್ತಿದೆ. ಎಲ್ಲಾ ದಾನಿಗಳು ಜನರಿಗೆ ಆಹಾರ, ದಿನನಿತ್ಯದ ವಸ್ತುಗಳನ್ನು ನೀಡುತ್ತಿದ್ದಾರೆ. ಆದರೆ, ಅಲ್ಲಿನ ಜಾನುವಾರುಗಳೂ ಸಹ ಆಹಾರವಿಲ್ಲದೆ ನಲುಗಿವೆ. ಹಾಗಾಗಿ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಜಿಗಳಿ ಗ್ರಾಮಸ್ಥರು, ಉತ್ತರಕರ್ನಾಟಕದ ಜಾನುವಾರುಗಳಿಗೆ ಮೇವು ನೀಡಿ ಮಾನವೀಯತೆ ಮೆರೆದಿದ್ದಾರೆ.