ಮಲ್ಪೆ ಬಂದರಿನಲ್ಲಿ ಮೀನು ಲೋಡ್ ವೇಳೆ ಅವಘಡ: ನೀರಿಗೆ ಬಿದ್ದ ಮಿನಿ ಟೆಂಪೋ - malpe beach
ಅನ್ಲೋಡ್ ಮಾಡುತ್ತಿದ್ದ ಬೋಟಿನ ಹಗ್ಗ ಕಳಚಿಕೊಂಡ ಹಿನ್ನೆಲೆ ಮಿನಿ ಟೆಂಪೊವೊಂದು ನೀರಿಗೆ ಬಿದ್ದ ಘಟನೆ ಇಂದು ಉಡುಪಿಯ ಮಲ್ಪೆ ಬಂದರಿನಲ್ಲಿ ನಡೆದಿದೆ.ಬೋಟಿನ ಹಗ್ಗ ಕಳಚಿದ ಹಿನ್ನೆಲೆ ನಿಧಾನವಾಗಿ ನೀರಿನಲ್ಲಿ ಬೋಟ್ ಹಿಂದಕ್ಕೆ ಸರಿದ ಪರಿಣಾಮ ಬೋಟಿಗೆ ಸಿಕ್ಕಿಬಿದ್ದು ಕೆಳಕ್ಕೆ ಎಳೆಯಲ್ಪಟ್ಟ ಮಿನಿ ಟೆಂಪೋ ನೀರಿಗೆ ಬಿದ್ದೇ ಬಿಟ್ಟಿತ್ತು. ಗಾಡಿ ಕೆಳಗೆ ಉರುಳುತ್ತಿದ್ದಂತೆ ಗಾಡಿಯಲ್ಲಿದ್ದ ವಾಹನ ಮಾಲೀಕ ವಿಠಲ ಪೂಜಾರಿ ವಾಹನದಿಂದ ಜಿಗಿದು ಪಾರಾಗಿದ್ದಾರೆ.ನೀರಿಗೆ ಬಿದ್ದ ವಾಹನವನ್ನು ಕ್ರೇನ್ ಸಹಾಯದಿಂದ ಮೇಲೆತ್ತಲಾಗಿದೆ.