ಸರಳವಾಗಿ ಗಣೇಶನನ್ನು ಬೀಳ್ಕೊಟ್ಟ ಗುಮ್ಮಟನಗರಿ ಜನ - ವಿಜಯಪುರ ಗಣೇಶ ನಿಮಜ್ಜನ
ವಿಜಯಪುರ: ನಗರದಲ್ಲಿ 5 ದಿನಗಳ ಕಾಲ ಪೂಜಿಸಿದ್ದ ಗಣೇಶ ಮೂರ್ತಿಗಳ ನಿಮಜ್ಜನ ಕಾರ್ಯ ಸರಳವಾಗಿ ನೆರವೇರಿತು. ಮಹಾನಗರ ಪಾಲಿಕೆಯಿಂದ ಗಣೇಶ ನಿಮಜ್ಜನಕ್ಕೆ ನಗರದ 4ಕ್ಕೂ ಅಧಿಕ ಕಡೆ ಕೃತಕ ಹೊಂಡ ನಿರ್ಮಿಸಲಾಗಿದೆ. ಜನರು ಅಂತಿಮವಾಗಿ ಪೂಜೆ ಸಲ್ಲಿಸುವ ಮೂಲಕ ಗಜಮುಖನನ್ನು ಬೀಳ್ಕೊಟ್ಟರು. ನಿಮಜ್ಜನ ಹಿನ್ನೆಲೆ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.