ಎತ್ತಿನ ಗಾಡಿ ಮೂಲಕ ಪ್ರತಿಭಟನೆಗೆ ಬಂದ ರೈತರು.. ಕೇಂದ್ರದ ವಿರುದ್ಧ ಹೋರಾಟಕ್ಕೆ ಬಲ ತಂದರು - Protest to revoke act
ಚಿತ್ರದುರ್ಗ : ರೈತ ವಿರೋಧಿ ಕಾಯ್ದೆ ತಿದ್ದುಪಡಿ ಜಾರಿಯನ್ನು ಕೇಂದ್ರ ಸರ್ಕಾರ ಹಿಂಪಡೆಯುವಂತೆ ಆಗ್ರಹಿಸಿ ಚಳ್ಳಕೆರೆ ಪಟ್ಟಣದಲ್ಲಿ ರೈತರು ಎತ್ತಿನಗಾಡಿಗಳೊಂದಿಗೆ ಬಂದು ಪ್ರತಿಭಟನೆ ನಡೆಸಿದರು. ಎಪಿಎಂಸಿ, ಭೂ ಸುಧಾರಣೆ ಹಾಗೂ ವಿದ್ಯುತ್ ಕಾಯ್ದೆ ತಿದ್ದುಪಡಿಯೂ ಸೇರಿದಂತೆ ಹಲವು ಕಾನೂನುಗಳು ರೈತರಿಗೆ ಮಾರಕವಾಗಿವೆ. ತಕ್ಷಣವೇ ಕೇಂದ್ರ ಸರ್ಕಾರ ಇವನ್ನು ವಾಪಸ್ ಪಡೆಯುವಂತೆ ರೈತರು ಎತ್ತಿನ ಗಾಡಿ ತಂದು ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದರು.