ಶಿವಮೊಗ್ಗದ ಕಲ್ಲು ಕ್ವಾರಿಯಲ್ಲಿ ಸ್ಫೋಟ: ಜನಪ್ರತಿನಿಧಿಗಳು ಮತ್ತು ಸ್ಥಳೀಯರ ಪ್ರತಿಕ್ರಿಯೆ
ಶಿವಮೊಗ್ಗ: ತಾಲೂಕಿನ ಹುಣಸೋಡು ಗ್ರಾಮದ ಬಳಿಯ ಕಲ್ಲು ಕ್ವಾರಿಯಲ್ಲಿ ನಡೆದ ಸ್ಫೋಟದ ಕುರಿತು ಸೂಕ್ತ ತನಿಖೆ ನಡೆಸಿ, ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕೆಂದು ಭದ್ರಾವತಿ ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್ ಆಗ್ರಹಿಸಿದ್ದಾರೆ. ಇದು ಸಿಎಂ ಅವರ ತವರು ಜಿಲ್ಲೆಯಾಗಿದ್ದು, ಇಷ್ಡೊಂದು ದೊಡ್ಡ ಮಟ್ಟದ ಸ್ಫೋಟಕ ಹೇಗೆ ಬಂತು ಎಂಬುದರ ಕುರಿತು ತನಿಖೆ ನಡೆಸಬೇಕು. ಈ ಘಟನೆಯ ಹೊಣೆ ಹೊತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪನವರು ರಾಜೀನಾಮೆ ನೀಡಬೇಕೆಂದು ಶಿವಮೊಗ್ಗದ ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್ ಆಗ್ರಹಿಸಿದ್ದಾರೆ. ಇಲ್ಲಿ ಪ್ರತಿ ದಿನ ಸ್ಫೋಟ ನಡೆಯುತ್ತದೆ. ಈ ಬಗ್ಗೆ ದೂರು ನೀಡಿದ್ರೂ ಯಾರು ಕ್ರಮ ತೆಗೆದುಕೊಂಡಿಲ್ಲ. ದೊಡ್ಡ ಸ್ಫೋಟದ ಶಬ್ಧ ಬರುತ್ತಿದ್ದಂತೆಯೇ ನಾವು ಮನೆಯಿಂದ ಹೊರಗೆ ಓಡಿ ಬಂದ್ವಿ. ನಂತರ ಕ್ವಾರಿ ಕಡೆ ಓಡಿ ಬಂದು ನೋಡಿದಾಗ ಇಲ್ಲಿ ಲಾರಿ ಪಲ್ಟಿಯಾಗಿದ್ದು ನೋಡಿದ್ವಿ. ರಾತ್ರಿ ಕತ್ತಲಿದ್ದ ಕಾರಣ ಎಷ್ಟು ಜನ ಸಾವನ್ನಪ್ಪಿದ್ದಾರೆ ಎಂದು ಗೊತ್ತಾಗಲಿಲ್ಲ ಎನ್ನುತ್ತಾರೆ ಸ್ಥಳೀಯರಾದ ಯುವರಾಜ್.