ತಮ್ಮ ಕ್ಷೇತ್ರದಲ್ಲಿ ರೌಂಡ್ ಹಾಕ್ತಾ ಮಾಜಿ ಸಚಿವ ಜಮೀರ್ ಜಾಗೃತಿ.. ಪೊಲೀಸರ ಮೈಕ್ನಿಂದಲೇ ಮನವಿ!
ಕಾಂಗ್ರೆಸ್ ಪಕ್ಷದ ಇಬ್ಬರು ಮಾಜಿ ಸಚಿವರು ಇಂದು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಕೊರೊನಾ ವಿರುದ್ಧ ಜನಜಾಗೃತಿ ಮೂಡಿಸುವ ಕಾರ್ಯ ಮಾಡಿದರು. ಸರ್ವಜ್ಞನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಾಜಿ ಸಚಿವ ಕೆ ಜೆ ಜಾರ್ಜ್ ಹಾಗೂ ತಮ್ಮ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜಮೀರ್ ಅಹ್ಮದ್ ಖಾನ್ ಕೊರೊನಾ ಬಗ್ಗೆ ಎಚ್ಚರಿಕೆಯಿಂದರುವಂತೆ ಮನವಿ ಮಾಡಿದರು. ಕೆ ಜೆ ಜಾರ್ಜ್ ಖುದ್ದು ತಾವೇ ಕೆಲವೆಡೆ ರಸ್ತೆಗೆ ರಾಸಾಯನಿಕ ಸಿಂಪಡಣೆ ಮಾಡಿದರು. ಇನ್ನೊಂದೆಡೆ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಜನರಿಗೆ ಮಾಸ್ಕ್ಗಳನ್ನು ವಿತರಿಸಿ ಎಚ್ಚರಿಕೆಯಿಂದಿರಲು ಹೇಳಿದ್ರು.