ಹುಣಸೋಡು ಗ್ರಾಮದಲ್ಲಿ ಜಿಲೆಟಿನ್ ಸ್ಫೋಟ.. ಗಣಿಗಳಿಂದ ಸ್ಥಳೀಯರಿಗೆ ನಿತ್ಯ ನರಕ
ಶಿವಮೊಗ್ಗ: ಅಕ್ರಮ ಕಲ್ಲು ಗಣಿಗಾರಿಕೆಯಿಂದ ಶಿವಮೊಗ್ಗ ತಾಲೂಕಿನ ಹುಣಸೋಡು ಗ್ರಾಮ ತತ್ತರಿಸಿ ಹೋಗಿದೆ. ನಗರ ವ್ಯಾಪ್ತಿಯಿಂದ ಐದಾರು ಕಿ.ಮೀ ದೂರದಲ್ಲಿರುವ ಹುಣಸೋಡು ಗ್ರಾಮದಲ್ಲಿ ಫಲವತ್ತಾದ ಮಣ್ಣು ಇದೆ. ಆದರೆ ಅಕ್ರಮವಾಗಿ ಕ್ವಾರಿಯಲ್ಲಿ ಸ್ಫೋಟಿಸುತ್ತಿರುವುದರಿಂದ ಇಲ್ಲಿನ ರೈತರ ಜಮೀನುಗಳತ್ತ ಕಲ್ಲುಗಳು ತೂರಿ ಬರುತ್ತಿವೆ ಬೀಳುತ್ತಿವೆ. ಪ್ರತಿ ದಿನ ಸಂಜೆ ಕತ್ತಲಾಗುತ್ತಿದ್ದಂತೆ ಕ್ವಾರಿಯಲ್ಲಿ ಜಿಲೆಟಿನ್ ಬ್ಲಾಸ್ಟ್ ಮಾಡುತ್ತಿದ್ದಾರೆ. ಇದರಿಂದ ನಮಗೆ ನಿತ್ಯ ಕಿರಿಕಿರಿಯಾಗುತ್ತಿದೆ ಎಂದು ರೈತರು ಆರೋಪಿಸಿದ್ದಾರೆ.