ನಾಗರಹೊಳೆಯಲ್ಲಿ ಪ್ರವಾಸಿಗರ ವಾಹನ ಅಟ್ಟಾಡಿಸಿಕೊಂಡು ಬಂದ ಗಜರಾಜ: ವಿಡಿಯೋ ನೋಡಿ - elephant following tourist vehicle video
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಪ್ರವಾಸಿಗರ ವಾಹನವನ್ನು ಆನೆಯೊಂದು ಅಟ್ಟಾಡಿಸಿಕೊಂಡು ಹೋಗುತ್ತಿರುವ ದೃಶ್ಯ ಪ್ರವಾಸಿಗರ ಮೊಬೈಲ್ ನಲ್ಲಿ ಸೆರೆಯಾಗಿದೆ. ಮಡಿಕೇರಿ-ಕುಟ್ಟ-ವಿರಾಜಪೇಟೆ ಕಡೆ ಹಾದುಹೋಗುವ ರಸ್ತೆಯಲ್ಲಿ ಮರಿಯೊಂದಿಗೆ ಇದ್ದ ಆನೆ ಪ್ರವಾಸಿಗರ ವಾಹನವನ್ನು ಗಾಬರಿಯಿಂದ ಹಿಂಬಾಲಿಸಿಕೊಂಡು ಓಡಿದೆ. ಕಳೆದ 2 ತಿಂಗಳಿನಿಂದ ಲಾಕ್ಡೌನ್ ಇದ್ದ ಸಂದರ್ಭದಲ್ಲಿ ಈ ರಸ್ತೆಯಲ್ಲಿ ಯಾವುದೇ ವಾಹನ ಸಂಚಾರ ಇರಲಿಲ್ಲ .ಆದರೆ ಲಾಕ್ಡೌನ್ ಸಡಿಲಿಕೆ ಹಿನ್ನೆಲೆ ಸಂಚಾರ ಆರಂಭವಾಗಿದ್ದು, ಗಾಬರಿಗೊಂಡಿರುವ ಆನೆಗಳು ಈ ರೀತಿ ಮಾಡುವುದು ಸಾಮಾನ್ಯ. ಆದರೂ ಪ್ರವಾಸಿಗರು ಹಾಗೂ ಈ ಮಾರ್ಗದಲ್ಲಿ ಸಂಚಾರ ಮಾಡುವವರು ಹುಷಾರಾಗಿರಬೇಕೆಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.