ಗಜಪಡೆ ಹಾವಳಿಗೆ ಬೇಸತ್ತ ದಾವಣಗೆರೆ ರೈತರು: ಬೆಳೆ ಪರಿಹಾರವೂ ಇಲ್ಲ, ಪುಂಡಾನೆಗಳ ಬಂಧನವೂ ಇಲ್ಲ - Davanagere elephant attack news
ಈ ಬಾರಿ ಉತ್ತಮ ಮಳೆಯಾಗಿದ್ದರಿಂದ ರೈತರು ಉತ್ತಮ ಬೆಳೆ ಬೆಳೆದಿದ್ದರು. ಫಸಲು ಚೆನ್ನಾಗಿ ಬಂದಿದೆ ಎಂದು ಖುಷಿಯಲ್ಲಿದ್ದ ರೈತರಿಗೆ ಗಜರಾಜನ ಹಾವಳಿಯಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಕಳೆದ ಒಂದು ವಾರದಿಂದ ಆನೆ ದಾಳಿಗೆ ದಾವಣಗೆರೆ ಜಿಲ್ಲೆಯ ಅನ್ನದಾತರು ಕಣ್ಣೀರಿಡುವಂತಾಗಿದೆ...