ಕೊರೊನಾ, ಅತಿವೃಷ್ಟಿ ನಡುವೆಯೂ ದೀಪಾವಳಿ ಖರೀದಿ ಬಲು ಜೋರು! - ಕೊರೊನಾ ಅತಿವೃಷ್ಟಿ ನಡುವೆಯೂ ದೀಪಾವಳಿ ಖರೀದಿ ಬಲು ಜೋರು
ಹುಬ್ಬಳ್ಳಿ/ಚಿತ್ರದುರ್ಗ: ಕೋಟೆ ನಾಡಿನಲ್ಲಿ ಬೆಳಕಿನ ಹಬ್ಬದ ಸಂಭ್ರಮ ಮನೆ ಮಾಡಿದೆ. ಕೊರೊನಾ ಮಧ್ಯೆ ದುರ್ಗದ ಜನ ಹೂವು, ಹಣ್ಣ ಖರೀದಿ ಮಾಡಲು ಮುಂದಾಗಿದ್ದರಿಂದ ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರ ಎಂಬುದು ಮಾಯವಾಗಿತ್ತು. ಚಿತ್ರದುರ್ಗ ನಗರದ ಮಾರುಕಟ್ಟೆಯಲ್ಲಿ ಹಣ್ಣು ಹಾಗೂ ಹೂವಿನ ಬೆಲೆ ಗಗನಕ್ಕೇರಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ. ಇನ್ನು ಹುಬ್ಬಳ್ಳಿ ನಗರದಲ್ಲಿ ಬಗೆ ಬಗೆಯ ಆಕಾಶ ಬುಟ್ಟಿಗಳು, ನಾನಾ ಅಲಂಕಾರಿಕ ದೀಪಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಹೀಗಾಗಿ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿದೆ. ಕೊರೊನಾ ನಡುವೆಯೂ ಹಬ್ಬದ ದಿನಗಳಲ್ಲಿ ಅಂಗಡಿಗಳಲ್ಲಿ ಉಂಟಾಗುವ ಜನದಟ್ಟಣೆ ತಪ್ಪಿಸಿಕೊಳ್ಳಲು ಮುಂಚಿತವಾಗಿಯೇ ಅಗತ್ಯ ವಸ್ತುಗಳ ಖರೀದಿಯಲ್ಲಿ ಜನತೆ ತೊಡಗಿರುವ ದೃಶ್ಯ ಕಂಡು ಬಂದಿತು. ನಗರದ ಜನತಾ ಬಜಾರ್, ದೊಡ್ಡ ಪೇಟ್, ದುರ್ಗದ ಬೈಲ್, ಅಕ್ಕಿಪೇಟ್, ಸೇರಿದಂತೆ ಎಲ್ಲಾ ಕಡೆ ಖರೀದಿ ದೃಶ್ಯಗಳು ಕಂಡು ಬಂದವು.