ಧಾರವಾಡ: ಪ್ರವಾಹ ಪೀಡಿತ ಪ್ರದೇಶಗಳಿಗೆ ಮಾಜಿ ಸಚಿವ ಹೆಚ್.ಡಿ ರೇವಣ್ಣ ಭೇಟಿ
ಧಾರವಾಡ: ಜಿಲ್ಲೆಯ ಅಳ್ನಾವರ ತಾಲೂಕಿನ ಪ್ರವಾಹ ಪೀಡಿತ ಸ್ಥಳಗಳಿಗೆ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಭೇಟಿ ನೀಡಿದ್ರು. ಅಳ್ನಾವರದಿಂದ ಪ್ರವಾಸ ಆರಂಭಿಸಿದ ಅವರು, ತಾಲೂಕಿನ ಹುಲಿಕೆರೆ ಪಟ್ಟಣದಲ್ಲಿ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ, ಪ್ರವಾಹ ಹಾನಿಯ ಕುರಿತು ಮಾಹಿತಿ ಪಡೆದುಕೊಂಡರು. ಸಚಿವರೆದುರು ಸಂತ್ರಸ್ತರು ತಮ್ಮ ನೋವನ್ನು ತೋಡಿಕೊಂಡರು.