ಕಾರವಾರದಲ್ಲಿ ದೀಪಾವಳಿ ಸಂಭ್ರಮ.... ಹೋರಿ ಬೆದರಿಸುವ ಸ್ಪರ್ಧೆ ಸಡಗರ - ಹುಣ್ಣಿಮೆಗೆ ಆಚರಿಸುವ ಸಂಪ್ರದಾಯ
ಬೆಳಕಿನ ಹಬ್ಬ ದೀಪಾವಳಿ ಹಾಗೂ ಅನ್ನದಾತರಿಗೆ ಅವಿನಾಭಾವ ಸಂಬಂಧ. ಈ ಹಬ್ಬದಲ್ಲಿ ಅವರೆಲ್ಲ ಬಲೀಂದ್ರನನ್ನ ತಂದು ಪೂಜೆ ಸಲ್ಲಿಸುವುದರ ಜತೆಗೆ ರೈತರ ಓಡನಾಡಿ ಗೋವುಗಳಿಗೂ ವಿಶೇಷ ಪೂಜೆ ಸಲ್ಲಿಸುತ್ತಾರೆ. ಆದರೆ, ಇಂತಹ ಹಬ್ಬ ಅನಿವಾರ್ಯ ಕಾರಣದಿಂದ ನಿಂತಾಗ ಹುಣ್ಣಿಮೆಗೆ ಆಚರಿಸುವ ಸಂಪ್ರದಾಯ ಉತ್ತರಕನ್ನಡ ಜಿಲ್ಲೆಯಲ್ಲಿದ್ದು, ಹಬ್ಬದ ನಿಮಿತ್ತ ಸಿದ್ದಾಪುರದ ಗ್ರಾಮವೊಂದರಲ್ಲಿ ನಡೆದ ಹೋರಿ ಬೆದರಿಸುವ ಸ್ಫರ್ಧೆ ಗಮನ ಸೆಳೆಯಿತು....