ಮಾಲೂರು ರೈಲ್ವೆ ನಿಲ್ದಾಣದ ಹಳಿ ಮೇಲೆ ಯುವಕನ ಶವ ಪತ್ತೆ:ಕೊಲೆ ಶಂಕೆ - ಕೋಲಾರ ಜಿಲ್ಲಾ ಸುದ್ದಿ
ಕೋಲಾರ ಜಿಲ್ಲೆಯ ಮಾಲೂರು ರೈಲ್ವೆ ನಿಲ್ದಾಣದ ಹಳಿಯ ಮೇಲೆ ಯುವಕನ ಶವ ಪತ್ತೆಯಾಗಿದ್ದು, ಪೊಲೀಸರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಕೆಜಿಎಫ್ ನಗರದ ಊರಿಗಾಂ ಬಡಾವಣೆಯ ಸಂತೋಷ ಕುಮಾರ್ (24) ಮೃತ ಯುವಕ. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಂಗಾರಪೇಟೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.