ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಬೆಳಗಾವಿಯಲ್ಲಿ ಸೈಕಲ್ ರ‍್ಯಾಲಿ - belgavi cycle rally
ಬೆಳಗಾವಿ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಜಿಲ್ಲೆಯ ಕಿತ್ತೂರಿನಿಂದ ಸಂಗೊಳ್ಳಿ ರಾಯಣ್ಣನ ಸ್ಮಾರಕವಿರುವ ಖಾನಾಪುರ ತಾಲೂಕಿನ ನಂದಗಡದವರೆಗೆ ಹಮ್ಮಿಕೊಂಡಿದ್ದ 75 ಸೈಕ್ಲಿಸ್ಟ್ಗಳ ಸೈಕಲ್ ರ‍್ಯಾಲಿಗೆ ಶಾಸಕ ಮಹಾಂತೇಶ ದೊಡ್ಡಗೌಡ್ರ ಹಾಗೂ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಕಿತ್ತೂರಿನ ಚೆನ್ನಮ್ಮ ವೃತ್ತದಲ್ಲಿ ಚಾಲನೆ ನೀಡಿದರು. ಕಿತ್ತೂರಿನಿಂದ ನಂದಗಡವರೆಗಿನ 75 ಕಿ.ಮೀ. ಸೈಕಲ್ ರ‍್ಯಾಲಿಯಲ್ಲಿ ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರದ 75 ಸೈಕ್ಲಿಸ್ಟ್ಗಳು ಭಾಗವಹಿದ್ದರು.