ಗದ್ದೆಯಲ್ಲಿ ಕಾಣಿಸಿಕೊಂಡ ಮೊಸಳೆ: ನಾಟಿ ಮಾಡಲು ಬಂದವರಿಗೆ ಭಯ - ಗದ್ದೆಯಲ್ಲಿ ಕಾಣಿಸಿಕೊಂಡ ಮೊಸಳೆ
ಕೊಪ್ಪಳ: ಭತ್ತದ ಗದ್ದೆಯಲ್ಲಿ ಮೊಸಳೆ ಪ್ರತ್ಯಕ್ಷವಾಗಿ ಜನರಲ್ಲಿ ಭೀತಿ ಮೂಡಿಸಿದ ಘಟನೆ ಜಿಲ್ಲೆಯ ಗಂಗಾವತಿ ತಾಲೂಕಿನ ಮೈಲಾಪುರದಲ್ಲಿ ನಡೆದಿದೆ. ತುಂಗಭದ್ರಾ ಎಡದಂಡೆಯ ಕಾಲುವೆಯ ಮೈಲಾಪುರ ಗ್ರಾಮದ ಭತ್ತದ ಗದ್ದೆಯಲ್ಲಿ ಮೊಸಳೆ ಮಲಗಿತ್ತು. ಭತ್ತದ ಸಸಿ ನಾಟಿ ಮಾಡಲು ಬಂದಿದ್ದ ಮಹಿಳೆಯರು ಮೊಸಳೆ ನೋಡಿ ಭಯಗೊಂಡು ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಅರಣ್ಯ ಇಲಾಖೆ ಅಧಿಕಾರಿಗಳು, ಸ್ಥಳೀಯರ ಸಹಾಯದಿಂದ ಮೊಸಳೆಯನ್ನು ಹಿಡಿದಿದ್ದಾರೆ.