ಮಿಮ್ಸ್ ಆಸ್ಪತ್ರೆಯಲ್ಲಿ ಬೆಡ್‌ಗಾಗಿ ಸೋಂಕಿತರ ಪರದಾಟ
ಮಂಡ್ಯ: ಸಕ್ಕರೆ ನಾಡಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ನಗರದ ಮಿಮ್ಸ್ ಆಸ್ಪತ್ರೆಗಳಲ್ಲಿ ಹಾಸಿಗೆಗೆ ಪರದಾಟ ಮುಂದುವರಿದಿದೆ. ಬೆಡ್‌ಗಾಗಿ ಆಸ್ಪತ್ರೆಗಳ ಮುಂದೆ ರೋಗಿಗಳು ಮತ್ತು ಸಂಬಂಧಿಕರು ಸರದಿಯಲ್ಲಿ ನಿಲ್ಲುವ ಸ್ಥಿತಿ ಉದ್ಭವಿಸಿದೆ. ಮಿಮ್ಸ್‌ನಲ್ಲಿನ ಕೊರೊನಾ ರೋಗಿಗಳಿಗೆ ಮೀಸಲಿಟ್ಟಿದ್ದ ಎಲ್ಲಾ ಬೆಡ್‌ಗಳು ಸಂಪೂರ್ಣ ಭರ್ತಿಯಾಗಿದ್ದು, ಆಸ್ಪತ್ರೆಯ ಮುಂಭಾಗ ಖಾಲಿಯಾಗಿರುವ ಕುರಿತು ನಾಮಫಲಕ ಪ್ರಕಟಿಸಿದ್ದಾರೆ. ಐಸೋಲೇಷನ್ ಹಾಸಿಗೆ 97, ಐಸಿಯು ವೆಂಟಿಲೇಟರ್ ಹಾಸಿಗೆ 30, ಹೈ ಪ್ಲೋ ಆಕ್ಸಿಜನ್ ಹಾಸಿಗೆ 25. ಸಾಮಾನ್ಯ ಹಾಸಿಗೆ 248 ಎಲ್ಲವೂ ಸಂಪೂರ್ಣ ಭರ್ತಿಯಾಗಿದೆ ಎಂದು ನಾಮಫಲಕ ಹಾಕಲಾಗಿದೆ. ಈ ಬಗ್ಗೆ ಈಟಿವಿ ಭಾರತ ಪ್ರತಿನಿಧಿ ವಾಕ್ ಥ್ರೂ ಮೂಲಕ ಮಾಹಿತಿ ನೀಡಿದ್ದಾರೆ.