ರಂಗೋಲಿ ಮಾರ್ಕ್ ಮಾಡದ ಅಂಗಡಿಗಳ ನಿಷೇಧ: ಖಡಕ್ ವಾರ್ನಿಂಗ್
ಬೆಳಗಾವಿ: ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡಗಟ್ಟಲು ಪ್ರಧಾನಿ ಮೋದಿ 21 ದಿನಗಳ ಕಾಲ ಲಾಕ್ಡೌನ್ ಘೋಷಿಸಿದ್ದರೂ ಜನರು ಓಡಾಟ ಮಾತ್ರ ನಿಯಂತ್ರಣಕ್ಕೆ ಬಂದಿಲ್ಲ. ಗುಂಪು ಗುಂಪಾಗಿ ಅಂಗಡಿಗಳಿಗೆ ತೆರೆಳಿ ದಿನಸಿ ಖರೀದಿಸುತ್ತಿದ್ದಾರೆ. ಹೀಗಾಗಿ ಕೊರೊನಾ ಹೆಚ್ಚಾಗುವ ಭೀತಿಯಿಂದ ಅಂಗಡಿಗಳ ಮುಂದೆ ಜನ ನಿಲ್ಲಲು ರಂಗೋಲಿ ಚೌಕಟ್ಟನ್ನು ಹಾಕಬೇಕು. ಇಲ್ಲದಿದ್ದರೆ ಅಂಗಡಿಯನ್ನು ಸೀಜ್ ಮಾಡಬೇಕಾಗುತ್ತದೆ ಎಂದು ಪಾಲಿಕೆ ಆಯುಕ್ತ ಕೆ.ಎಚ್.ಜಗದೀಶ ಎಚ್ಚರಿಕೆ ನೀಡಿದ್ದಾರೆ.