ಬಾಗಲಕೋಟೆ ಜಿಲ್ಲೆಯ ಸಾರಿಗೆ ಸಂಸ್ಥೆಗೂ ತಟ್ಟಿದ ಕೊರೊನಾ ಭೀತಿ: ದಿನಕ್ಕೆ 10-15 ಲಕ್ಷ ರೂ ನಷ್ಟ - ಬಾಗಲಕೋಟೆ ಜಿಲ್ಲೆಯ ಸಾರಿಗೆ ಸಂಸ್ಥೆ
ಕೊರೊನಾ ವೈರಸ್ ಭೀತಿಯಿಂದ ಸಾರಿಗೆ ಸಂಸ್ಥಗೂ ಬಿಸಿ ತಟ್ಟಿದ್ದು, ಬಾಗಲಕೋಟೆ ಜಿಲ್ಲೆಯ ಸಾರಿಗೆ ಸಂಸ್ಥೆಗೆ ಕೋಟ್ಯಂತರ ರೂಪಾಯಿಗಳ ನಷ್ಟವಾಗಿದೆ. ಒಟ್ಟು 650 ಬಸ್ ಮಾರ್ಗಗಳಲ್ಲಿ 42 ಮಾರ್ಗಗಳ ಸಂಚಾರವನ್ನು ಜನ ದಟ್ಟಣೆ ಇಲ್ಲದೆ ಬಂದ್ ಮಾಡಲಾಗಿದೆ. ಇದರಿಂದ ಪ್ರತಿ ನಿತ್ಯ 10- 15 ಲಕ್ಷ ರೂಪಾಯಿಗಳ ಹಾನಿ ಆಗಲಿದೆ. ಅಲ್ಲದೆ ಶ್ರೀಶೈಲ ಮಲ್ಲಿಕಾರ್ಜುನ ಜಾತ್ರೆ ನಿಷೇಧ ಮಾಡುತ್ತಿರುವುದರಿಂದ ಸುಮಾರು 2 ಕೋಟಿ ನಷ್ಟವಾಗಲಿದೆ ಎಂದು ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಇದರ ಜೊತೆಗೆ ಮುಂಬಯಿ ಹಾಗೂ ಪೂನಾಗೆ ಹೋಗುವ ಐದು ಬಸ್ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.