ಬೈಕ್- ಕಾರು ಡಿಕ್ಕಿ: ಚಳಗೇರಿಯಲ್ಲಿ ಬೈಕ್ ಸವಾರ ಸಾವು
ಹಾವೇರಿ: ಬೈಕ್ ಹಾಗೂ ಕಾರು ನಡುವೆ ಭೀಕರ ಅಪಘಾತ ಸಂಭವಿಸಿದೆ. ಕಾರು ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದಲ್ಲಿ ನಡೆದಿದೆ. ವಿರೂಪಾಕ್ಷಪ್ಪ ಭಜಂತ್ರಿ (60) ಮೃತ ವ್ಯಕ್ತಿ. ವಿರೂಪಾಕ್ಷಪ್ಪ ಪಾತ್ರೆಗಳ ವ್ಯಾಪಾರ ಮಾಡುತ್ತಿದ್ದ. ಇಂದು ವ್ಯಾಪಾರಕ್ಕಾಗಿ ಬೈಕ್ನಲ್ಲಿ ಬರುತ್ತಿದ್ದಾಗ ಅಪಘಾತ ನಡೆದಿದೆ. ರಾಣೆಬೆನ್ನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.