ಕರ್ನಾಟಕ

karnataka

ETV Bharat / videos

ಡೆಸ್ಕ್ ಸಮಸ್ಯೆ ತೋಡಿಕೊಂಡ ವಸತಿ ಶಾಲೆ ಮಕ್ಕಳು: ಕಿವಿಗೊಡದೇ ಮುಂದೆ ಸಾಗಿದ್ರಾ ಸಿಎಂ? - ಲೆಟೆಸ್ಟ್ ಚಿತ್ರದುರ್ಗ ನ್ಯೂಸ್

By

Published : Nov 7, 2019, 9:17 PM IST

ಶಾಲೆಯಲ್ಲಿ ಡೆಸ್ಕ್ ಇಲ್ಲ ಸರ್.. ಈ ಸಮಸ್ಯೆಯನ್ನು ಬಗೆಹರಿಸಿ ಎಂದು ವಸತಿ ಶಾಲೆಯ ವಿದ್ಯಾರ್ಥಿಗಳು ಒಕ್ಕೋರಲಿನಿಂದ ಕೂಗಿಕೊಂಡ್ರು ಸಿಎಂ ಬಿ ಎಸ್ ಯಡಿಯೂರಪ್ಪ ಸಮಸ್ಯೆ ಆಲಿಸದೆ ಮುಂದೆ‌ ಸಾಗಿದರು ಎಂಬ ಆರೋಪ ಕೇಳಿಬಂದಿದೆ. ಹೊಸದುರ್ಗ ತಾಲೂಕಿನ ಸಾಣೆಹಳ್ಳಿಯ ತರಳಬಾಳು ಶಾಖ ಮಠದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ನಾಟಕೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಗಮಿಸಿದ್ದ ಅವರು, ಹೊಸದುರ್ಗ ತಾಲೂಕಿನ ನೀರಗುಂದ ಗ್ರಾಮದ ಬಳಿ ಹೆಲಿಪ್ಯಾಡ್​ಗೆ ಬಂದಿಳಿದ ವೇಳೆ ಈ ಘಟನೆ ನಡೆದಿದೆ. ಹ್ಯಾಲಿಪ್ಯಾಡ್​ನಿಂದ ಕೂಗಳತೆಯಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಆವರಣದಲ್ಲಿ ಜಮಾಯಿಸಿದ್ದ ವಿದ್ಯಾರ್ಥಿಗಳ ಬಳಿ ತೆರಳಿದ್ದ ಸಿಎಂಗೆ ವಿದ್ಯಾರ್ಥಿಗಳು ಡೆಸ್ಕ್ ಇಲ್ಲವೆಂದು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.

ABOUT THE AUTHOR

...view details