ಕರ್ನಾಟಕ

karnataka

ETV Bharat / videos

ದೇಶವೇ ಲಾಕ್​​ಡೌನ್​​​... ಬೆಳೆದ ಕಲ್ಲಂಗಡಿ ಮಾರಾಟ ಮಾಡಲಾಗದೇ ರೈತ ಕಂಗಾಲು

By

Published : Mar 30, 2020, 5:55 PM IST

ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಭಾರತ ಲಾಕ್​​​ಡೌನ್​​​ ಆಗಿದ್ದು, ಬೆಳೆದ ಕಲ್ಲಂಗಡಿ ಬೆಳೆ ಮಾರಾಟ ಮಾಡಲು ಸಾಧ್ಯವಾಗದೆ ರೈತ ಕಂಗಾಲಾಗಿದ್ದಾನೆ. ಬೆಳೆದ ಹಣ್ಣುಗಳು, ತರಕಾರಿಗಳನ್ನು ಮಾರಲು ಚಿಕ್ಕೋಡಿ ಉಪ ವಿಭಾಗದ ಕಾಗವಾಡ, ಅಥಣಿ, ನಿಪ್ಪಾಣಿ, ಚಿಕ್ಕೋಡಿ, ರಾಯಭಾಗದ ಹೀಗೆ ವಿವಿಧ ತಾಲೂಕಿನ ರೈತರು ಪಕ್ಕದ ಮಹಾರಾಷ್ಟ್ರದ ಮಾರುಕಟ್ಟೆಯನ್ನೇ ಅವಲಂಬಿಸಿದ್ದರು. ಈಗ ದೇಶವೇ ಲಾಕ್​​ಡೌನ್​​​ ಆದ ಕಾರಣ ಬೆಳೆದ ಬೆಳೆ ಮಾರಾಟ ಮಾಡಲು ಸಾಧ್ಯವಾಗದೆ ನಷ್ಟ ಅನುಭವಿಸುವಂತಾಗಿದೆ. ಪಕ್ಕದ ಹಳ್ಳಿಗಳಿಗೆ ಹೋಗಿ‌ ಮಾರಾಟ ಮಾಡಬೇಕೆಂದರೆ ಈಗ ಹಳ್ಳಿಗಳಲ್ಲೂ ಸಹಿತ ಪೊಲೀಸರು ಬಿಡುತ್ತಿಲ್ಲ ಎಂದು ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ABOUT THE AUTHOR

...view details