ರಸ್ತೆಯಲ್ಲಿಯೇ ಚಿರತೆಗಳ ಓಡಾಟ: ಭಯಭೀತರಾದ ವಾಹನ ಸವಾರರು
ಕಾರವಾರ: ರಸ್ತೆಯಲ್ಲಿ ಎರಡು ಚಿರತೆ ಪ್ರತ್ಯಕ್ಷವಾಗಿ ಕೆಲ ಕಾಲ ವಾಹನ ಸವಾರರು ಭಯಭೀತರಾದ ಘಟನೆ ಜೊಯಿಡಾ ತಾಲೂಕಿನ ಬಾಪೇಲಿ ಗ್ರಾಮದ ಬಳಿ ನಡೆದಿದೆ. ಮಂಗಳವಾರ ಮಧ್ಯಾಹ್ನದ ವೇಳೆ ಚಿರತೆಗಳು ರಸ್ತೆಯಲ್ಲಿ ಪ್ರತ್ಯಕ್ಷವಾಗಿವೆ. ಜೊಯಿಡಾ ತಾಲೂಕಿನ ವಿವಿಧ ಜನವಸತಿ ಪ್ರದೇಶದ ಬಳಿಯೇ ವನ್ಯಜೀವಿಗಳು ಕಂಡುಬರುತ್ತಿದ್ದು ಸ್ಥಳೀಯರು ಕೂಡ ಆತಂಕದಲ್ಲಿ ಜೀವನ ನಡೆಸುತ್ತಿದ್ದಾರೆ.