ಸಮುದಾಯದ ಹಕ್ಕೊತ್ತಾಯ ಸರ್ಕಾರಕ್ಕೆ ತಲುಪಿಸಲು ಮಠಾಧೀಶರ ಸಭೆ: ಚಂದ್ರಶೇಖರ್ ಶಿವಾಚಾರ್ಯ ಶ್ರೀ
ಬೆಂಗಳೂರು: ಪಂಚಮಸಾಲಿ ಸಮುದಾಯದ ಪಾದಯಾತ್ರೆಗೆ ಪರ್ಯಾಯವಾಗಿ ವೀರಶೈವ ಲಿಂಗಾಯತ ಮಠಾಧೀಶರ ಸಭೆ ನಡೆಸಿಲ್ಲ. ನಮ್ಮ ಸಮುದಾಯದ ಹಕ್ಕೊತ್ತಾಯವನ್ನು ಸರ್ಕಾರಕ್ಕೆ ತಲುಪಿಸಲು ಸಭೆ ನಡೆಸಲಾಯಿತು ಎಂದು ಹುಕ್ಕೇರಿ ಮಠದ ಚಂದ್ರಶೇಖರ್ ಶಿವಾಚಾರ್ಯ ಸ್ವಾಮೀಜಿಗಳು ಸ್ಪಷ್ಟಪಡಿಸಿದ್ದಾರೆ. ಇಂದಿನ ಸಭೆ, ಮೀಸಲಾತಿ ಬೇಡಿಕೆ ಕುರಿತು ಶ್ರೀಗಳ ಈಟಿವಿ ಭಾರತದೊಂದಿಗೆ ಅಭಿಪ್ರಾಯ ಹಂಚಿಕೊಂಡರು.