ಬಿತ್ತನೆ ಈರುಳ್ಳಿ ಬೆಲೆ ಏರಿಕೆ ಖಂಡಿಸಿ ಚಾಮರಾಜನಗರದಲ್ಲಿ ರೈತರ ಪ್ರತಿಭಟನೆ - ಬಿತ್ತನೆ ಈರುಳ್ಳಿ ಬೆಲೆ ಗಗನಕ್ಕೆ
ಚಾಮರಾಜನಗರ: ಬಿತ್ತನೆ ಈರುಳ್ಳಿ ಬೀಜದ ಬೆಲೆ ಗಗನಕ್ಕೇರಿರುವುದನ್ನು ಖಂಡಿಸಿ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಕೃಷಿ ಮಾರುಕಟ್ಟೆ ಮುಂಭಾಗ ರೈತರು ಪ್ರತಿಭಟನೆ ನಡೆಸಿದರು. ಕಳೆದ ವಾರ 5,500 ರೂ. ಇದ್ದ ಈರುಳ್ಳಿ ಬೆಲೆ ದಿಢೀರನೇ ಇಂದು 13,000 ಆಗಿದ್ದು, ಹೇಗೆ ಖರೀದಿಸುವುದು ರೈತರು ಆಕ್ರೋಶ ವ್ಯಕ್ತಪಡಿಸಿದರು. 13 ಸಾವಿರ ಕೊಟ್ಟು ಬಿತ್ತನೆ ಈರುಳ್ಳಿ ಕೊಂಡುಕೊಳ್ಳುವುದು ಅಸಾಧ್ಯದ ಮಾತು. ಕಳೆದ ವಾರ ಇದ್ದ ಬೆಲೆಯಲ್ಲೇ ರೈತರಿಗೆ ನೀಡಬೇಕೆಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ. ಸ್ಥಳಕ್ಕೆ ತಹಶಿಲ್ದಾರ್ ಭೇಟಿ ನೀಡಿ ಹಸಿ ಈರುಳ್ಳಿ ಬೆಲೆಯೇ ಹೆಚ್ಚಿದ್ದು ಬೆಲೆ ಕಡಿಮೆ ಮಾಡಲು ಆಗುವುದಿಲ್ಲ ಎಂದು ಮನವೊಲಿಸುವ ಯತ್ನ ನಡೆಸಿದರು.