'ಮೈಸೂರು ಪಾಕ್' ಅನ್ನು ಯಾರೂ ಕೂಡ ಕಿತ್ತುಕೊಳ್ಳಲು ಸಾಧ್ಯವಿಲ್ಲ: ಪ್ರತಾಪ್ ಸಿಂಹ - Prathap Simha
ಆನಂದ್ ರಂಗನಾಥನ್ ಅವರು ಟ್ವೀಟ್ ಮಾಡಿ ಭೌಗೋಳಿಕ ವಲಯದಂತೆ ಮೈಸೂರು ಪಾಕ್' ತಮಿಳುನಾಡು ಸೇರಿದ್ದು ಎಂದು ಬರೆದುಕೊಂಡಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಸಂಸದ ಪ್ರತಾಪ್ ಸಿಂಹ, ಜಿಯಾಗ್ರಾಫಿಕಲ್ ಇಂಡಿಕೇಷನ್(GI) ನಂತೆ ಮೈಸೂರು ಎನ್ನುವ ಹೆಸರಿನಲ್ಲಿಯೇ ಪಾಕ್ ಸೇರಿಕೊಂಡು 'ಮೈಸೂರುಪಾಕ್' ಅಗಿದೆ. ಆದರೆ ಸಾಮಾನ್ಯ ಜ್ಞಾನವಿಲ್ಲದೆ ಅವರು ಟ್ವೀಟ್ ಮಾಡಿದ್ದಾರೆ ಎಂದು ಕುಟುಕಿದರು. ಇನ್ನು ಮೈಸೂರು ಪರಂಪರೆಯನ್ನು ಯಾರೂ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಅದರ ಪರಂಪರೆ ಸದಾ ಉಳಿಯಲಿದೆ. 'ಮೈಸೂರು ಪಾಕ್' ತಮಿಳುನಾಡಿಗೆ ಸೇರಿದ್ದು, ಅಂತ ಕೇಂದ್ರ ಸರ್ಕಾರ ಎಲ್ಲೂ ಹೇಳಿಲ್ಲವೆಂದು ಸ್ಪಷ್ಟನೆ ನೀಡಿದ್ದಾರೆ.
Last Updated : Sep 16, 2019, 6:45 PM IST