ಗಣಿನಾಡಿನಲ್ಲಿ ನಿಲ್ಲದ ಸಿಎಎ ವಿರೋಧದ ಕಿಚ್ಚು! - ಸಿಎಎ ವಿರೋಧದ ಕಿಚ್ಚು
ಬಳ್ಳಾರಿ: ಸಿಎಎ ಕಾಯಿದೆಯನ್ನು ವಿರೋಧಿಸಿ ಬಳ್ಳಾರಿಯಲ್ಲಿಂದ ಬೃಹತ್ ಸಮಾವೇಶ ನಡೆಯಿತು. ಕೌಲ್ ಬಜಾರ್ ಪ್ರದೇಶ ವ್ಯಾಪ್ತಿಯ ಮಸ್ತಾನ್ ವಲಿ ದರ್ಗಾ ಬಳಿ ಸೇರಿದ ಸಾವಿರಾರು ಮುಸ್ಲಿಂ ಧರ್ಮೀಯರು ಸಿಎಎ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ರು. ಬಳಿಕ ದಿವಾನ್ ಮಸ್ತಾನದ ದರ್ಗಾದ ಬಳಿ ಬಹಿರಂಗ ಸಮಾವೇಶವನ್ನು ನಡೆಸಲಾಯಿತು. ಜಿಲ್ಲಾ ಪೊಲೀಸ್ ಇಲಾಖೆಯು ಮುಂಜಾಗೃತ ಕ್ರಮವಾಗಿ ಬೃಹತ್ ಮೆರವಣಿಗೆಗೆ ಅವಕಾಶ ನೀಡಿಲ್ಲ. ಈ ಸಮಾವೇಶದ ಹಿನ್ನೆಲೆ ನಗರದಾದ್ಯಂತ ಬಿಗಿಯಾದ ಪೊಲೀಸ್ ಬಂದೋಬಸ್ತ್ ವಹಿಸಲಾಗಿತ್ತು.