ಬೆಳಗಾವಿಯಲ್ಲಿ ಕ್ರೇನ್ ಬಳಸಿ ಎಮ್ಮೆ ರಕ್ಷಿಸಿದ ಸ್ಥಳೀಯರು ...! - flood in Karnataka,
ಬೆಳಗಾವಿಯಲ್ಲಿ ಘಟಪ್ರಭಾ ನದಿ ಉಕ್ಕಿ ಹರಿದು ಕೊಣ್ಣೂರ ಪಟ್ಟಣಕ್ಕೆ ನೀರು ನುಗ್ಗಿದ್ದು, ಜಮೀನಿನಲ್ಲಿ ಸಿಲುಕಿ ಹಾಕಿಕೊಂಡಿದ್ದ ಎಮ್ಮೆಗಳನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಜಮೀನಿನಲ್ಲಿದ್ದ ಅವುಗಳನ್ನು ರಕ್ಷಿಸಲು ಕ್ರೇನ್ ಗಳನ್ನು ಬಳಸಲಾಗಿದ್ದು, ಸುರಕ್ಷಿತವಾಗಿ ಮೇಲೆತ್ತಿ ಕಾಪಾಡಲಾಗಿದೆ. ಅಲ್ಲದೇ ಗೋಕಾಕ್ ತಾಲೂಕಿನ ಲೋಳಸುರ ಸೇತುವೆ ಮುಳಗಡೆಯಾಗಿದ್ದು, ಕೊಣ್ಣೂರು ಕಡೆ ಹೋಗುವ ಸೇತುವೆ ಕೂಡ ಮುಳುಗಡೆಯಾಗಿದೆ.