ಯಡಿಯೂರಪ್ಪ ಮಂಡಿಸಿದ ಬಜೆಟ್ ನಿರಾಶಾದಾಯಕ:ವಿನಯ್ ಕುಮಾರ್ ಸೊರಕೆ - State Budget 2020
ಉಡುಪಿ: ಯಡಿಯೂರಪ್ಪ ಮಂಡಿಸಿದ ಬಜೆಟ್ ನಿರಾಶಾದಾಯಕವಾಗಿದ್ದು, ಕೇಂದ್ರದ ಅನುದಾನ ಬಂದಿಲ್ಲವೆಂದು ಸಿಎಂ ಬಜೆಟ್ ಭಾಷಣದಲ್ಲೇ ಒಪ್ಪಿಕೊಂಡಿದ್ದಾರೆ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ವ್ಯಂಗ್ಯವಾಡಿದ್ದಾರೆ. ಸಿಎಂ ಬಿಎಸ್ವೈ ಕರಾವಳಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರಿಗೆ ಸಿಎಂ ಸೆಡ್ಡು ಹೊಡೆದಿದ್ದಾರೆ. ಎತ್ತಿನಹೊಳೆ ಯೋಜನೆಗೆ ನಳಿನ್ ಕುಮಾರ್ ಕಟೀಲ್ ವಿರೋಧಿಸಿದ್ದರು. ದಕ್ಷಿಣ ಕನ್ನಡದಲ್ಲಿ ಅವರ ನೇತೃತ್ವದಲ್ಲೇ ಹೋರಾಟಗಳು ನಡೆದಿದ್ದವು. ಆದರೆ ಎತ್ತಿನಹೊಳೆಗೆ ಸಿಎಂ 1500 ಕೋಟಿ ಬಿಡುಗಡೆ ಮಾಡಿದ್ದಾರೆ ಎಂದರು. ಕೊರೊನಾ ತಡೆಗಟ್ಟುವ ಮುನ್ನೆಚ್ಚರಿಕಾ ಕ್ರಮ ಬಜೆಟ್ನಲ್ಲಿ ಇಲ್ಲ. ಕರಾವಳಿ ಸಮಸ್ಯೆಯನ್ನು ಸಿಎಂ ಉಲ್ಲೇಖ ಮಾಡಿಲ್ಲ. ಉದ್ಯೋಗ ಸೃಷ್ಟಿಯ ಯಾವುದೇ ಕಾರ್ಯಕ್ರಮ ಇಲ್ಲ ಎಂದು ಹೇಳಿದ್ದಾರೆ.