ಪ್ರವಾಹ ತಗ್ಗಲೆಂದು ಹೋಮ-ಹವನ.. ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ಪ್ರಾರ್ಥನೆ.. - ಅನಿಲ್ ಮೆಣಸಿನಕಾಯಿ
ಗದಗ: ರಾಜ್ಯಾದ್ಯಂತ ಅನಾಹುತಕಾರಿಯಾಗಿ ಸುರಿಯುತ್ತಿದ್ದ ಮಳೆ ಕೊಂಚ ಕಡಿಮೆಯಾಗಿದ್ದು, ಪ್ರವಾಹ ತಗ್ಗಲಿ ಎಂದು ನಗರದ ಸಿದ್ದಿವಿನಾಯಕ ದೇವಸ್ಥಾನದಲ್ಲಿ ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ಅವರ ನೇತೃತ್ವದಲ್ಲಿ ವೃಶ್ಯಶೃಂಗ ಹೋಮ ನೆರವೇರಿಸಲಾಯಿತು. ರಾಜ್ಯದಲ್ಲಿ ಮಳೆ ತಗ್ಗಿ ಪ್ರವಾಹ ಕಡಿಮೆಯಾಗಿ ಸಾವು, ನೋವು ನಿಂತು ಜನಜೀವನ ಮರಳಿ ಯಥಾಸ್ಥಿತಿಗೆ ಮರಳಲಿ ಎಂದು ವಿನಾಯಕನಲ್ಲಿ ಬೇಡಿಕೊಳ್ಳಲಾಯಿತು.