ಮರಳಿನಲ್ಲಿ ಪಿಎಂ ಮೋದಿ ಭಾವಚಿತ್ರ... ವಿಶಿಷ್ಟವಾಗಿ ಶುಭಾಶಯ ಕೋರಿದ ಧಾರವಾಡ ಕಲಾವಿದ - ಗಾಜಿನ ಪೆಟ್ಟಿಗೆ ಮೇಲೆ ಮರಳು ಕಲಾಕೃತಿ
ಧಾರವಾಡ: ಪ್ರಧಾನಿ ನರೇಂದ್ರ ಮೋದಿ 70ನೇ ಜನ್ಮದಿನವನ್ನು ಇಡೀ ದೇಶಾದ್ಯಂತ ಬಿಜೆಪಿ ಕಾರ್ಯಕರ್ತರು ಹಾಗೂ ಮೋದಿ ಅಭಿಮಾನಿಗಳು ಆಚರಣೆ ಮಾಡುತ್ತಿದ್ದಾರೆ. ಆದರೆ ನಗರದ ಕಲಾವಿದನೊಬ್ಬ ವಿಶೇಷವಾಗಿ ಜನ್ಮದಿನ ಆಚರಣೆ ಮಾಡಿದ್ದಾರೆ. ಕೆಲಗೇರಿಯ ಗಾಯತ್ರಿಪುರದ ಕಲಾವಿದ ಮಂಜುನಾಥ ಹಿರೇಮಠ, ಗಾಜಿನ ಪೆಟ್ಟಿಗೆ ಮೇಲೆ ಮರಳು ಕಲಾಕೃತಿಯಲ್ಲಿ ಪ್ರಧಾನಿ ಮೋದಿ ಅವರ ಭಾವಚಿತ್ರ ಬಿಡಿಸಿ, ವಿಶಿಷ್ಟವಾಗಿ ಜನ್ಮದಿನದ ಶುಭಾಶಯ ಕೋರಿದ್ದಾರೆ.