ಕರ್ನಾಟಕ

karnataka

ETV Bharat / videos

ದುಸ್ಸಾಹಸ ಮಾಡಲು ಹೋಗಿ ಕೊಚ್ಚಿ ಹೋದ ಬೈಕ್ ಸವಾರರು: ಸ್ಥಳೀಯರಿಂದ ರಕ್ಷಣೆ - ಬೆಳಗಾವಿಯ ಸವದತ್ತಿಯಲ್ಲಿ ಬೈಕ್ ಸವಾರರ ರಕ್ಷಣೆ

By

Published : Sep 21, 2020, 12:01 PM IST

ಬೆಳಗಾವಿ: ಹಳ್ಳದ ನೀರಿನ ರಭಸಕ್ಕೆ ಬೈಕ್ ಸಮೇತ ಕೊಚ್ಚಿಕೊಂಡು ಹೋಗುತ್ತಿದ್ದ ಇಬ್ಬರನ್ನು ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದಲ್ಲಿ ರಕ್ಷಿಸಲಾಗಿದೆ. ಕಳೆದೆರಡು ದಿನಗಳಿಂದ ಸವದತ್ತಿ ತಾಲೂಕಿನಾದ್ಯಂತ ಸುರಿಯುತ್ತಿರುವ ಮಳೆಗೆ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಸ್ಥಳೀಯರ ವಿರೋಧದ ನಡುವೆಯೂ ರಭಸವಾಗಿ ಹರಿಯುತ್ತಿದ್ದ ಹಳ್ಳದಲ್ಲಿ ಇಬ್ಬರು ಬೈಕ್ ಮೂಲಕ ದಾಟಲು ಪ್ರಯತ್ನಿಸಿದ ವೇಳೆ ಕೊಚ್ಚಿಕೊಂಡು ಹೋಗಿದ್ದಾರೆ. ಈ ವೇಳೆ ಕಾರ್ಯಪ್ರವೃತ್ತರಾದ ಸ್ಥಳೀಯರು ಇಬ್ಬರನ್ನೂ ರಕ್ಷಿಸಿ, ಹುಚ್ಚಾಟ ಮಾಡಿದ್ದಕ್ಕೆ ಥಳಿಸಿದ್ದಾರೆ. ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

For All Latest Updates

ABOUT THE AUTHOR

...view details