ಗಣೇಶನ ಪ್ರತಿಷ್ಠಾಪಿಸಿದ ಪೊಲೀಸ್ ಪೇದೆಗಳು.. ಕುಟುಂಬ ಸದಸ್ಯರೊಂದಿಗೆ ಸಂಭ್ರಮ - ಪೊಲೀಸ್ ಪೇದೆಗಳು
ಸದಾ ಕರ್ತವ್ಯದಲ್ಲೇ ನಿರತರಾಗಿರುವ ಪೊಲೀಸ್ ಪೇದೆಗಳು ಇಂದು ತಮ್ಮ ಕುಟುಂಬಗಳೊಂದಿಗೆ ಗಣೇಶನ ಹಬ್ಬವನ್ನು ಭಕ್ತಿ ಪೂರ್ವಕವಾಗಿ ಆಚರಣೆ ಮಾಡಿದ್ದು ವಿಶೇಷವಾಗಿತ್ತು. ಬಳ್ಳಾರಿ ಗ್ರಾಮಾಂತರ ಪ್ರದೇಶದ ರೇಡಿಯೋ ಪಾರ್ಕ್ ಪೊಲೀಸ್ ವಸತಿ ಗೃಹದ ಪೊಲೀಸ್ ಪೇದೆಗಳು ಮಣ್ಣಿನ ಗಣಪತಿ ಮೂರ್ತಿ ಪ್ರತಿಷ್ಠಾಪಿಸಿ, ಮನೆಗಳಿಂದ ಕಾಯಿ, ಕರ್ಪೂರ, ಹೂವಿನ ಹಾರ ಮತ್ತು ಎಡೆಯನ್ನು ಮಾಡಿಕೊಂಡು ಬಂದು ವಿಘ್ನೇಶ್ವರನಿಗೆ ಪೂಜೆ ಸಲ್ಲಿಸಿದರು.