ರಾಜಧಾನಿಯಲ್ಲೂ 'ಕಮಲ' ಕಿಲ ಕಿಲ, ಶಿವಾಜಿನಗರದಲ್ಲಿ ಕಾಂಗ್ರೆಸ್ ಪಾರುಪತ್ಯ - ಬೆಂಗಳೂರು ಉಪಚುನಾವಣೆ ಫಲಿತಾಂಶ
ಉಪಚುನಾವಣಾ ಮಿನಿ ಸಮರದಲ್ಲಿ ಪ್ರತಿಪಕ್ಷಗಳ ನಾಯಕರು ಬಳಸಿದ್ದ ಅನರ್ಹಾಸ್ತ್ರ ಪ್ರಭಾವ ಬೀರಿಲ್ಲ. ಕಮಲ ಮತ್ತಷ್ಟು ಅರಳಿದ್ದು, ಬಿಜೆಪಿ ಸರ್ಕಾರ ಸುಭದ್ರವಾಗಿದೆ. ರಾಜ್ಯ ರಾಜಧಾನಿಯಲ್ಲೂ ಕೂಡಾ ಕಮಲಕ್ಕೆ ಮನಸೋತಿದ್ದಾನೆ ಮತದಾರ. ಆದ್ರೆ ಸಿಲಿಕಾನ್ ಸಿಟಿಯ ಒಂದು ಕ್ಷೇತ್ರದಲ್ಲಿ ಮಾತ್ರ ಕೈ ಅಬ್ಬರಿಸಿ ತನ್ನ ಮರ್ಯಾದೆ ಉಳಿಸಿಕೊಂಡಿದೆ. ಉಳಿದ ಮೂವರಿಗೆ ಇದ್ದ ಅನರ್ಹತೆಯ ಕಳಂಕವನ್ನು ಈ ಕ್ಷೇತ್ರಗಳ ಜನರೇ ತೆಗೆದುಹಾಕಿದ್ದಾರೆ.