ಸೋನೆ ಮಳೆಗೆ ಕುಸಿದ ಮನೆ: ಮಲಗಿದ್ದವರು ಚಿರನಿದ್ರೆಗೆ ಜಾರಿದ ಹೃದಯ ವಿದ್ರಾವಕ ಸ್ಟೋರಿ - bagalakote home collapse news
ಹೊರಗೆ ಎಡೆಬಿಡದೆ ಸುರಿಯುತ್ತಿರುವ ಮಳೆ.. ಮಣ್ಣಿನ ಮನೆಯೊಳಗೆ ಅವರೆಲ್ಲಾ ಬೆಚ್ಚಗೆ ಕಂಬಳಿ ಹೊದ್ದು ಮಲಗಿ ನಿದ್ದೆಯಲ್ಲಿದ್ದರು. ಕತ್ತಲು ಕಳೆದು ಬೆಳಕು ಹರಿಯುವಷ್ಟರಲ್ಲಿ ಅವರನ್ನು ವಿಧಿ ಆಹುತಿ ಪಡೆದುಕೊಂಡಿದೆ. ಬಾಗಲಕೋಟೆಯಲ್ಲಿ ನಡೆದ ಹೃದಯ ವಿದ್ರಾವಕ ಘಟನೆ ಇದು.