ಮೈಸೂರು: ಕಬಿನಿಗೆ ಬಾಗಿನ ಅರ್ಪಿಸಿದ ಸಿಎಂ ಬಿಎಸ್ವೈ - ಬಾಗಿನ ಅರ್ಪಣೆ
ಮೈದುಂಬಿರುವ ಕಬಿನಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಾಗಿನ ಅರ್ಪಿಸಿದರು. ಹೆಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯಕ್ಕೆ ಆಗಮಿಸಿದ ಸಿಎಂ ಬಿಎಸ್ವೈ ಜೊತೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ಸಚಿವ ಎಸ್.ಟಿ.ಸೋಮಶೇಖರ್, ಸ್ಥಳಿಯ ಶಾಸಕ ಅನಿಲ್ ಚಿಕ್ಕಮಾದು ಸಾಥ್ ನೀಡಿದರು. ನಂತರ ಕಬಿನಿ ಜಲಾಶಯದ ಮುಂಭಾಗ ನೂತನ ಸೇತುವೆಗೆ ಬಿಎಸ್ವೈ ಗುದ್ದಲಿ ಪೂಜೆ ನೆರವೇರಿಸಿದರು.