'ಅರಸೀಕೆರೆಯ ದೊಡ್ಡಕೆರೆ ಒತ್ತುವರಿಗೆ ಮಾಫಿಯಾ ಸಂಚು' - ಹಾಸನ ಲೇಟೆಸ್ಟ್ ನ್ಯೂಸ್
ಹಾಸನ: ಅರಸೀಕೆರೆ ಸುತ್ತಮುತ್ತಲಿನ 15ರಿಂದ 20 ಗ್ರಾಮಗಳಿಗೆ ನೀರೊದಗಿಸುವ ದೊಡ್ಡ ಕೆರೆ ಭರ್ತಿಯಾಗಿ 20 ವರ್ಷಗಳೇ ಕಳೆದಿವೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲವರು ಕೆರೆಯ ಭೂಮಿ ಉಳುಮೆ ಮಾಡುವ ಮೂಲಕ ಒತ್ತುವರಿಗೆ ಹೊಂಚು ಹಾಕುತ್ತಿದ್ದಾರೆ. ಇದರಿಂದ ಎಚ್ಚೆತ್ತ ತಾಲೂಕು ಆಡಳಿತ ಇಂಥವರನ್ನು ಪತ್ತೆ ಹಚ್ಚಲು ಕಾವಲುಗಾರರನ್ನು ನೇಮಿಸಿದೆ. ಈ ಹಿಂದೆ ಕೆರೆಯ ಪರಿಸ್ಥಿತಿ ಹೇಗಿತ್ತು?, ಈಗ ಹೇಗಿದೆ ಎಂಬುದರ ಬಗ್ಗೆ ನಮ್ಮ ಪ್ರತಿನಿಧಿ ಸುನಿಲ್ ಕುಂಬೇನಹಳ್ಳಿ ನಡೆಸಿರುವ ವಾಕ್ಥ್ರೂ ಹಾಗೂ ರೈತ ಮುಖಂಡನ ಜೊತೆ ನಡೆಸಿರುವ ಚಿಟ್ಚಾಟ್ ಇಲ್ಲಿದೆ.