ಪಿಯು ಟಾಪರ್ಗೆ ಎಪಿಜೆ ಅಬ್ದುಲ್ ಕಲಾಂರೇ ರೋಲ್ ಮಾಡೆಲ್ - ವಾಣಿಜ್ಯ ವಿಭಾಗ
ಎಪಿಜೆ ಅಬ್ದುಲ್ ಕಲಾಂ ಅವರ ಸಂದೇಶಗಳನ್ನು ನಿತ್ಯ ಓದುತ್ತಿದ್ದೆ. ಅವರೇ ನನಗೆ ರೋಲ್ ಮಾಡೆಲ್ ಆಗಿದ್ದರು ಎಂದು ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ 589 ಅಂಕಗಳನ್ನು ಗಳಿಸಿರುವ ತುಮಕೂರಿನ ಕೆ.ಬಿ.ಹೇಮಂತ್ ಈಟಿವಿ ಭಾರತ್ ಜೊತೆ ಸಂತಸ ಹಂಚಿಕೊಂಡಿದ್ದಾನೆ. ತುಮಕೂರು ನಗರದ ವಿದ್ಯಾ ವಾಹಿನಿ ಕಾಲೇಜಿನ ವಿದ್ಯಾರ್ಥಿಯಾಗಿರುವ ಹೇಮಂತ್, ಕನ್ನಡ ಭಾಷೆಯಲ್ಲಿ 98, ಇಂಗ್ಲಿಷ್ನಲ್ಲಿ 93, ಬಿಸಿನೆಸ್ ಸ್ಟಡೀಸ್ನಲ್ಲಿ 98, ಅಕೌಂಟೆನ್ಸಿಯಲ್ಲಿ 100, ಸ್ಟಾಟಿಸ್ಟಿಕ್ಸ್ 100, ಬೇಸಿಕ್ ಮ್ಯಾಥ್ಸ್ನಲ್ಲಿ 100 ಅಂಕಗಳನ್ನು ಗಳಿಸಿದ್ದಾನೆ.