ಕೊರೊನಾ ವೈರಸ್ ತಡೆಗೆ ವೈರಾಣು ನಿರೋಧಕ ಸಿಂಪಡಣೆ...! - coronavirus news
ಕಲಬುರಗಿ: ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಮಹಾನಗರ ಪಾಲಿಕೆಯಿಂದ ಪ್ರಮುಖ ರಸ್ತೆಗಳು, ವೃತ್ತಗಳಲ್ಲಿ ಮೂರು ದೊಡ್ಡ ಟ್ಯಾಂಕರ್ ಹಾಗೂ ಬಡಾವಣೆಗಳಲ್ಲಿ ಸಣ್ಣ ಟ್ಯಾಂಕರ್ಗಳ ಮೂಲಕ ವೈರಾಣು ನಿರೋಧಕ ಸಿಂಪಡಣೆ ಮಾಡಲಾಗಿದೆ. ಕೊರೊನಾ ಸೋಂಕು ಪತ್ತೆಯಾದವರ ಬಡಾವಣೆಗಳಾದ ವಾರ್ಡ್ ನಂ.15, 30ರ ಎಲ್ಲ ಮನೆಗಳ ಸುತ್ತಲೂ ಫಾಗಿಂಗ್ ಮಾಡಲಾಯಿತು.