ಕರ್ನಾಟಕ

karnataka

ETV Bharat / videos

ಹಿಂದಿನಿಂದ ಬೈಕ್‌ಗೆ ಡಿಕ್ಕಿ ಹೊಡೆದ ಕಾರು: ಇಬ್ಬರಿಗೆ ಗಂಭೀರ ಗಾಯ - Car hit the bike from behind

By

Published : Dec 28, 2020, 2:45 PM IST

ಕೊಡಗು: ವೇಗವಾಗಿ ಬಂದ ಕಾರೊಂದು ಬೈಕ್‌ಗೆ ಡಿಕ್ಕಿ ಹೊಡೆದಿರುವ ಘಟನೆ ವಿರಾಜಪೇಟೆ ತಾಲೂಕಿನ ಕಂಬದ ಗಡಿಯಾರ ವೃತ್ತದ ಬಳಿ ನಡೆದಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರ ನೆಲಕ್ಕೆ ಹಾರಿ ಬಿದ್ದಿದ್ದು, ಕೆಳಕ್ಕೆ ಬಿದ್ದ ಸವಾರನ ಮೇಲೂ ಕಾರು ಹರಿದಿದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡ ಬೈಕ್ ಸವಾರ ರಂಜನ್ ಸ್ಥಿತಿ ಚಿಂತಾಜನಕವಾಗಿದ್ದು, ಕಾರು ಚಾಲಕ ಬೋಪಣ್ಣನ ತಲೆಗೆ ಗಂಭೀರ ಗಾಯಗಳಾಗಿ ಬಲಗಾಲು ಮುರಿದಿದೆ. ಇಬ್ಬರನ್ನು ವಿರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಭಯಾನಕ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.‌

ABOUT THE AUTHOR

...view details