ಲಂಚ ಸ್ವೀಕರಿಸುವ ವೇಳೆ ಎಸಿಬಿ ಬಲೆಗೆ; ಗ್ರಾಮೀಣ ಬಿಇಒ ,ಎಫ್ ಡಿಎ ಅಧಿಕಾರಿಗಳ ಸೆರೆ
ಶಾಲೆಯ ಪರವಾನಗಿಯನ್ನು ನವೀಕರಣ ಮಾಡಲು ಲಂಚ ಸ್ವೀಕರಿಸುವ ವೇಳೆ ಹುಬ್ಬಳ್ಳಿ ಗ್ರಾಮೀಣ ಬಿಇಒ ಹಾಗೂ ಎಫ್ ಡಿಎ ಎಸಿಬಿ ಬಲೆಗೆ ಬಿದ್ದಿದ್ದಾರೆ.ಜಿಲ್ಲೆಯ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಂ ಹುಡೇದಮನಿ, ಎಫ್ ಡಿ ಎ ಬಸವರಾಜು ಎಸಿಬಿ ಬಲೆಗೆ ಬಿದ್ದ ಅಧಿಕಾರಿಗಳು.ಖಾಸಗಿ ಶಾಲೆ ನಡೆಸಲು ಪರವಾನಗಿ ನವೀಕರಣಕ್ಕಾಗಿ ವಾಗ್ದೇವಿ ಎಜ್ಯುಕೇಷನ್ ಸೊಸೈಟಿ ಮುಖ್ಯಸ್ಥೆ ಆಶಾ ಕುಲಕರ್ಣಿ ಎಂಬುವವರಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಇಂದು ಆಶಾ ಅವರಿಂದ ಎರಡು ಸಾವಿರ ಲಂಚ ತೆಗೆದುಕೊಳ್ಳುವಾಗ ಎಸಿಬಿ ಅಧಿಕಾರಿಗಳಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ.