ಮಣ್ಣಿನ ಮಡಿಕೆಗಳ ಬಳಸಿದ್ರೇ ಸಿಗುತ್ತೆ ಆರೋಗ್ಯದ ಹೊನ್ನು..ಕೌಶಲ್ಯಯುಕ್ತ ಕುಂಬಾರಿಕೆ! - ಸುಳ್ಯ ವಿಧಾನಸಭಾ ಕ್ಷೇತ್ರದ ಕಡಬ ತಾಲೂಕಿನ ಕೋಡಿಂಬಾಳ ದೊಡ್ಡಕೊಪ್ಪ
ಮಂಗಳೂರು: ಬದಲಾವಣೆ ಅನ್ನೋದು ನಿರಂತರ ಪ್ರಕ್ರಿಯೆ. ಕಾಲಚಕ್ರ ಉರುಳಿದಂತೆ ಎಲ್ಲವೂ ಬದಲಾಗುತ್ತಾ ಸಾಗುತ್ತೆ. ಹಾಗೇ ಕಾಲದ ಜತೆಗೆ ಬದಲಾಗದಿದ್ರೇ ಹಿಂದೆ ಉಳಿದುಬಿಡೋ ಸಾಧ್ಯತೆಯಿರುತ್ತೆ. ಹರಿಯೋ ನೀರು ಹೇಗೆ ಶುದ್ಧವಾಗಿರುತ್ತೋ ಹಾಗೇ ಕಾಲದ ಜತೆಗೆ ಸಾಗುತ್ತಿರಬೇಕು. ಇದನ್ನ ಚೆನ್ನಾಗಿಯೇ ಅರಿತ ಕುಂಬಾರನೊಬ್ಬ ಈಗ ತನ್ನ ಕುಲಕಸುಬಿನಲ್ಲಿ ಸಾಕಷ್ಟು ಕೌಶಲ್ಯ ವೃದ್ಧಿಸಿಕೊಂಡು ಸೈ ಎನಿಸಿಕೊಳ್ತಿದಾನೆ.