ಸಿದ್ದಾಪುರದಲ್ಲಿದ್ದಾರೆ 74ರ ಹರೆಯದ ಅಪರೂಪದ ಶಿಕ್ಷಕ.. ನಿವೃತ್ತಿಯ ಬಳಿಕವೂ ಮಕ್ಕಳಿಗೆ ಉಚಿತ ಶಿಕ್ಷಣ - teacher in Karwar
74ರ ಇಳಿ ವಯಸ್ಸಿನ ಇವರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನಲ್ಲಿ ಮಂಜುನಾಥ ಗುರೂಜಿ. ಇವರ ಪೂರ್ಣ ಹೆಸರು ಮಂಜುನಾಥ ಗಣೇಶ ಭಟ್. ಕಲ್ಲೆಮಕ್ಕಿ ಗ್ರಾಮದ ನಿವಾಸಿಯಾಗಿರುವ ಇವರು ನಿವೃತ್ತ ಶಿಕ್ಷಕ. ಸೇವೆಯಿಂದ ನಿವೃತ್ತಿಯಾಗಿ 17 ವರ್ಷಗಳೇ ಕಳೆದರೂ ಮಕ್ಕಳಿಗೆ ಶಿಕ್ಷಣ ಕಲಿಸುವುದನ್ನು ಬಿಟ್ಟಿಲ್ಲ. ಯಾವುದೇ ಪಗಾರ ಪಡೆಯದೇ ಪಿಂಚಣಿ ಹಣದಲ್ಲಿಯೇ ಇವರು ತಮ್ಮ ಬೋಧನಾ ಸೇವೆ ಮುಂದುವರಿಸಿದ್ದಾರೆ.
Last Updated : Sep 6, 2019, 10:17 PM IST