ದಾಂಡೇಲಿಯಲ್ಲಿ ರೆಸಾರ್ಟ್ ಸೇರುತ್ತಿದ್ದ 7 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ
ಕಾರವಾರ: ಕಾಡಿನಿಂದ ನಾಡಿಗೆ ಬಂದು ರೆಸಾರ್ಟ್ ಸೇರುತ್ತಿದ್ದ ಕಾಳಿಂಗ ಸರ್ಪವೊಂದನ್ನು ಹಿಡಿದು ಮರಳಿ ಕಾಡಿಗೆ ಬಿಟ್ಟಿರುವ ಘಟನೆ ದಾಂಡೇಲಿಯಲ್ಲಿ ನಡೆದಿದೆ. ನಗರದ ಗಣೇಶ್ ಗುಡಿ ರಸ್ತೆಯ ಓಲ್ಟ್ ಮ್ಯಾಗ್ಸಿನ್ ಹೌಸ್ ಜಂಗಲ್ ರೆಸಾರ್ಟ್ ಬಳಿ ಕಾಣಿಸಿಕೊಂಡಿದ್ದ ಕಾಳಿಂಗ ಸರ್ಪ, ನಿಧಾನವಾಗಿ ಅಲ್ಲಿಯೇ ಇದ್ದ ಕಲ್ಲಿನೊಳಗೆ ಸೇರಿಕೊಂಡಿತ್ತು. ಸುಮಾರು 7 ಅಡಿ ಉದ್ದದ ಕಾಳಿಂಗ ಸರ್ಪ ಕಂಡ ರೆಸಾರ್ಟ್ ಸಿಬ್ಬಂದಿ, ಉರಗ ಪ್ರೇಮಿ ರಜಾಕ್ ಗಮನಕ್ಕೆ ತಂದಿದ್ದರು. ತಕ್ಷಣ ಸ್ಥಳಕ್ಕೆ ಆಗಮಿಸಿದ ರಜಾಕ್ ಹಾವು ಹಿಡಿದು ಮತ್ತೆ ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟಿದ್ದಾರೆ.