ಬಳ್ಳಾರಿಯಲ್ಲಿ ಅನಗತ್ಯವಾಗಿ ಸಂಚರಿಸಿದ 4,008 ವಾಹನಗಳು ಜಪ್ತಿ: 35 ಲಕ್ಷಕ್ಕೂ ಹೆಚ್ಚು ದಂಡ ವಸೂಲಿ
ಬಳ್ಳಾರಿ: ಜಿಲ್ಲೆಯಲ್ಲಿ ಲಾಕ್ಡೌನ್ ಅವಧಿಯಲ್ಲಿ ಅನಗತ್ಯವಾಗಿ ಸಂಚರಿಸಿದ ಒಟ್ಟು 4,008 ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಅಲ್ಲದೆ, ₹ 35 ಲಕ್ಷಕ್ಕಿಂತ ಅಧಿಕ ದಂಡ ವಸೂಲಿ ಮಾಡಿದ್ದಾರೆ. ಅದರಲ್ಲಿ 3,789 ದ್ವಿಚಕ್ರ ವಾಹನ, 103 ತ್ರಿಚಕ್ರ ವಾಹನ ಹಾಗೂ 116 ನಾಲ್ಕು ಚಕ್ರದ ವಾಹನಗಳನ್ನು ಜಪ್ತಿ ಮಾಡಲಾಗಿದೆ.