ರಷ್ಯಾದಲ್ಲಿ ಸಿಲುಕಿರುವ 150 ಕನ್ನಡಿಗ ವಿದ್ಯಾರ್ಥಿಗಳು ತಾಯ್ನಾಡಿಗೆ - ಬೆಂಗಳೂರು ಸುದ್ದಿ
ಕೊರೊನಾ ಬಿಕ್ಕಟ್ಟಿನ ಸನ್ನಿವೇಷದಲ್ಲಿ ರಷ್ಯಾದಲ್ಲಿ ಸಿಲುಕಿರುವ 150 ವಿದ್ಯಾರ್ಥಿಗಳು, ರಾಜ್ಯಸಭಾ ಸದಸ್ಯರಾದ ಜಿ.ಸಿ.ಚಂದ್ರಶೇಖರ್ ಅವರ ಸಹಾಯದಿಂದ ಬೆಂಗಳೂರಿಗೆ ಮರಳುತ್ತಿದ್ದಾರೆ. ವಿದ್ಯಾರ್ಥಿಗಳ ಮನವಿ ಮೇರೆಗೆ ಚಂದ್ರಶೇಖರ್ ವೈಯಕ್ತಿಕ ಮುತುವರ್ಜಿವಹಿಸಿ ವಿದ್ಯಾರ್ಥಿಗಳನ್ನು ತಾಯಿನಾಡಿಗೆ ಕರೆಸಿಕೊಳ್ಳುವಲ್ಲಿ ಸಹಾಯ ಮಾಡಿದ್ದಾರೆ. ಹೀಗಾಗಿ ಭಾರತಕ್ಕೆ ಮರಳಲು ಸಹಾಯ ಮಾಡಿದ ಚಂದ್ರಶೇಖರ್ಗೆ ವಿದ್ಯಾರ್ಥಿಗಳು ವಿಡಿಯೋ ಮೂಲಕ ಧನ್ಯವಾದ ತಿಳಿಸಿದ್ದಾರೆ. ಅಲ್ಲದೆ ರಷ್ಯಾದಲ್ಲಿರುವ ಭಾರತದ ರಾಯಭಾರಿ ಕಚೇರಿಗೂ ಧನ್ಯವಾದ ತಿಳಿಸಿದ್ದಾರೆ.