ಚಿತ್ರದುರ್ಗದಲ್ಲಿ ಲಾಕ್ ಡೌನ್ಗೆ ಡೋಂಟ್ ಕೇರ್ : ಬೆಳಂಬೆಳ್ಳಗ್ಗೆ 150 ಬೈಕ್ ಸೀಜ್
ಇಂದಿನಿಂದ 14 ದಿನಗಳ ಕಾಲ ರಾಜ್ಯಾದ್ಯಂತ ಲಾಕ್ ಡೌನ್ ಹಿನ್ನೆಲೆ, ಚಿತ್ರದುರ್ಗ ಜಿಲ್ಲೆಯ ಜನರ ಅನಗತ್ಯ ಓಡಾಟ ನಿಯಂತ್ರಿಸಲು ಎಲ್ಲೆಡೆ ಪೊಲೀಸ್ ಬಿಗಿ ಭದ್ರತೆ ಮಾಡಲಾಗಿದೆ. ಇಂದು ಬೆಳ್ಳಂಬೆಳ್ಳಗೆ ರಸ್ತೆಗಿಳಿದ ಪೊಲೀಸರು ಲಾಕ್ ಡೌನ್ ಇದ್ದರು ರಸ್ತೆಗಿಳಿದ ವಾಹನ ಸವಾರರಿಗೆ ಬಿಸಿ ಮುಟ್ಟಿಸಿದ್ದಾರೆ. ನಗರದ ಗಾಂಧಿವೃತ್ತ ಸೇರಿದಂತೆ ಮುಖ್ಯ ರಸ್ತೆಗಳಲ್ಲಿ ಅನಗತ್ಯ ಓಡಾಟದ ವಾಹನಗಳಿಗೆ ದಂಡದ ವಿಧಿಸಿ, ವಾಹನಗಳನ್ನ ಸೀಜ್ ಮಾಡಿದರು. ಚಳ್ಳಕೆರೆ ನಗರದಲ್ಲಿ ಡಿವೈಎಸ್ಪಿ ಶ್ರೀಧರ್, ಸರ್ಕಲ್ ಇನ್ಸ್ಪೆಕ್ಟರ್ ತಿಪ್ಪೇಸ್ವಾಮಿ ಸಿಬ್ಬಂದಿಗಳೊಂದಿಗೆ ವಾಲ್ಮೀಕಿ ವೃತ್ತ ನೆಹರು ವೃತ್ತ ನಗರದ ಮುಖ್ಯ ರಸ್ತೆಗಳಲ್ಲಿ ಗಸ್ತು ಅನವಶ್ಯ ಬೈಕ್ ಓಡಾಡುತ್ತಿದ್ದ ಸವಾರಿಗೆ ಬಿಸಿ ಮುಟ್ಟಿಸಿದರು. ಬೆಳ್ಳಗೆಯಿಂದಲೇ 150ಕ್ಕೂ ಹೆಚ್ಚು ಬೈಕ್ ಗಳನ್ನು ಚಳ್ಳಕೆರೆ ಪೊಲೀಸರು ಜಪ್ತಿ ಮಾಡಿದ್ದಾರೆ.
TAGGED:
150 bike siege police