ನಾನು ಚಿಕ್ಕಂದಿನಿಂದಲೂ ಇಂತಹ ವೈರೆಸ್ ಕಂಡಿರಲಿಲ್ಲ: ನೀನಾಸಂ ಸತೀಶ್ - ಕೊರೊನಾ ಬಗ್ಗೆ ನೀನಾಸಂ ಸತೀಶ್
ಕೊರೊನಾ ಎಂಬ ಮಹಾಮಾರಿ ಇಡೀ ಜಗತ್ತಿಗೆ ತೊಂದರೆ ಕೊಡ್ತಿದೆ. ನಾನು ಚಿಕ್ಕವಯಸ್ಸಿನಿಂದಲೂ ಈ ರೀತಿ ಜನರಿಗೆ ಭಯ ಹುಟ್ಟಿಸಿದ ವೈರಸ್ ಕಂಡಿರಲಿಲ್ಲ ಎಂದು ನೀನಾಸಂ ಸತೀಶ್ ಹೇಳಿದ್ದಾರೆ. ಈಗ ನಾವು ಪ್ರಜ್ಞಾವಂತ ನಾಗರೀಕರಾಗಿ ತುಂಬಾ ಕೇರ್ ತೆಗೆದುಕೊಳ್ಳಬೇಕು. ಹೊರಗಿನಿಂದ ಬಂದ ತಕ್ಷಣ ಕೈ ತೊಳೆಯ ಬೇಕು. ಕೆಮ್ಮು, ಜ್ವರ ಇರುವ ವ್ಯಕ್ತಿಗಳಿಂದ ದೂರ ಇರಬೇಕು ಎಂದು ಸತೀಶ್ ಸಲಹೆ ನೀಡಿದ್ದಾರೆ.