ಕ್ಯಾಮರಾ ಕಣ್ಣಿಗೆ ಸೆರೆಯಾದ ಬಾಲಿವುಡ್ ಸೆಲೆಬ್ರಿಟಿಗಳು: ವಿಡಿಯೋ - ಸೆಲೆಬ್ರಿಟಿಗಳು ಪಾಪರಾಜಿಗಳ ಕ್ಯಾಮರಾ ಕಣ್ಣಿಗೆ ಸೆರೆ
ಮುಂಬೈ ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ ಹೆಚ್ಚು ನೆಲೆಸಿರುವ ಸೆಲಬ್ರಿಟಿಗಳು ಆಗಾಗ್ಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ನಿನ್ನೆ ಸಹ ಅನೇಕ ಮಂದಿ ಬಾಲಿವುಡ್ ಸೆಲೆಬ್ರಿಟಿಗಳು ಪಾಪರಾಜಿಗಳ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದಾರೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಕಂಗನಾ ರಣಾವತ್, ಸೋನಲ್ ಚೌಹಾನ್, ಜಾನ್ವಿ ಕಪೂರ್ ಮತ್ತು ಪ್ರಾಚಿ ದೇಸಾಯಿ ಕಾಣಿಸಿಕೊಂಡರೆ, ಇತ್ತ ಮಲೈಕಾ ಅರೋರಾ ಬಾಂದ್ರಾ ಪೋಸ್ಟ್ ಬಳಿ ಜಿಮ್ ಮುಗಿಸಿಕೊಂಡು ಬಂದರು. ಜೊತೆಗೆ ಅನನ್ಯಾ ಪಾಂಡೆ ಕೂಡ ಯೋಗ ತರಗತಿ ಮುಗಿಸಿಕೊಂಡು ಬರುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಯಿತು.